
ಬೆಂಗಳೂರಿನ ಐಷಾರಾಮಿ ಕಾನ್ರಾಡ್ ಹೋಟೆಲ್‌ನ ಈಜುಕೊಳದಲ್ಲಿ ವಿದ್ಯುತ್ ಸ್ಪರ್ಶದಿಂದ ಇಬ್ಬರು ವಿದೇಶಿ ಪ್ರಜೆಗಳು ಮೃತಪಟ್ಟಿದ್ದಾರೆ.
ಸ್ಲೋವಾಕಿಯಾ ಮೂಲದ ಜುರಾಜ್ ಹೋರ್ವತ್ ಮತ್ತು ಜರ್ಮನಿ ಮೂಲದ ಅಲೆಕ್ಸಾಂಡರ್ ಮ್ಯಾಕ್ಸಿಮಿಲಿಯನ್ ಥೈಸ್ ವಿದ್ಯುತ್ ಆಘಾತಕ್ಕೆ ಒಳಗಾಗಿದ್ದು, ರಕ್ಷಣೆಗೆ ತೆರಳಿದವರಿಗೂ ಗಾಯಗಳಾಗಿವೆ.
ಈಜುಕೊಳದ ರೇಲಿಂಗ್‌ಗಳು ಹಾಗೂ ಎಲ್‌ಇಡಿ ದೀಪಗಳ ವಿದ್ಯುತ್ ಸಂಪರ್ಕ ಸೋರಿಕೆಯಾಗಿರುವ ಸಂಶಯದ ಮೇಲೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.