
ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಮನವಿಯ ಮೇರೆಗೆ ಇಂಡಿಗೋ ಏರ್‌ಲೈನ್ಸ್ ಅಕ್ಟೋಬರ್ 1ರಿಂದ ದೆಹಲಿ-ಹುಬ್ಬಳ್ಳಿ ಮತ್ತು ದೆಹಲಿ-ಬೆಳಗಾವಿ ನಡುವೆ ದೈನಂದಿನ ವಿಮಾನ ಸೇವೆ ಆರಂಭಿಸಲಿದೆ.
ವಿಮಾನ ಸಂಖ್ಯೆ 6E758 ಸಂಜೆ 4:30ಕ್ಕೆ ದೆಹಲಿಯಿಂದ ಹೊರಟು 6:55ಕ್ಕೆ ಹುಬ್ಬಳ್ಳಿ ತಲುಪಲಿದ್ದು, 6E2511 ವಿಮಾನ ಬೆಳಗ್ಗೆ 6:15ಕ್ಕೆ ದೆಹಲಿಯಿಂದ ಹೊರಟು 8:40ಕ್ಕೆ ಬೆಳಗಾವಿ ತಲುಪಲಿದೆ.
ಈ ಹೊಸ ವಿಮಾನ ಸಂಪರ್ಕದಿಂದ ಉತ್ತರ ಕರ್ನಾಟಕದ ವ್ಯಾಪಾರ, ಉದ್ಯೋಗ, ಶಿಕ್ಷಣ ಮತ್ತು ಪ್ರವಾಸೋದ್ಯಮ ಕ್ಷೇತ್ರಗಳಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.