
ಬೆಂಗಳೂರಿನ ನ್ಯೂ ಹೊರಿಜನ್ ಪಬ್ಲಿಕ್ ಶಾಲೆಯ ಜೀವಶಾಸ್ತ್ರ ಶಿಕ್ಷಕಿ ರಾಧಾ ರಾಜೇಶ್ ಅವರು 2026ರ ಸಾಲಿನ ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ನವದೆಹಲಿಯಲ್ಲಿ ಸ್ವೀಕರಿಸಿದ್ದಾರೆ.
ದೇಶಾದ್ಯಂತ ಆಯ್ಕೆಯಾದ 48 ಅತ್ಯುತ್ತಮ ಶಿಕ್ಷಕರಲ್ಲಿ ಸಿಐಸ್‌ಸಿಇ ಮಂಡಳಿಯನ್ನು ಪ್ರತಿನಿಧಿಸಿದ ಏಕೈಕ ಶಿಕ್ಷಕಿ ಇವರಾಗಿದ್ದು, 2022ರಿಂದ 2026ರವರೆಗೆ ಸತತ ನಾಲ್ಕು ಬಾರಿ ಇಸ್ರೋದ ಟಿಚರ್ಸ್ ಇನ್‌ಸೈಟ್ ಅವಾರ್ಡ್ ಪಡೆದಿದ್ದಾರೆ.
ರಾಧಾ ರಾಜೇಶ್ ಅವರು ಬೋಧನೆಯಲ್ಲಿ ಕೃತಕ ಬುದ್ಧಿಮತ್ತೆ (AI), 3D ಸಿಮ್ಯುಲೇಶನ್‌ಗಳನ್ನು ಬಳಸುವುದಲ್ಲದೆ, ತಮ್ಮ ಯೂಟ್ಯೂಬ್ ಚಾನೆಲ್ ಮೂಲಕ ಸಾವಿರಾರು ವಿದ್ಯಾರ್ಥಿಗಳಿಗೆ ಜೀವಶಾಸ್ತ್ರವನ್ನು ಸರಳವಾಗಿ ಕಲಿಸುತ್ತಿದ್ದಾರೆ.