
ಭಾರತೀಯ ವಾಯುಪಡೆಯು ಸೆಪ್ಟೆಂಬರ್ 21 ರಿಂದ ಅಕ್ಟೋಬರ್ 7 ರವರೆಗೆ ರಾಜಸ್ಥಾನದ ಗಡಿಯಲ್ಲಿ 17 ದಿನಗಳ ಬೃಹತ್ ಸಮರಾಭ್ಯಾಸ ನಡೆಸಲು ಸಜ್ಜಾಗಿದ್ದು, ಈ ಸಂಬಂಧ ಅಧಿಕೃತ ನೋಟಮ್ ಜಾರಿಗೊಳಿಸಿದೆ.
ಜೈಸಲ್ಮೇರ್, ಬಾರ್ಮರ್, ಫಲೋಡಿ, ಜೋಧ್‌ಪುರ ಮತ್ತು ನಾಲಾ-ಬಿಕಾನೇರ್ ವಾಯುನೆಲೆಗಳ ವ್ಯಾಪ್ತಿಯಲ್ಲಿ 40 ಸಾವಿರ ಅಡಿ ಎತ್ತರದವರೆಗೆ ನಾಗರಿಕ ವಿಮಾನ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ.
ಪಾಕಿಸ್ತಾನದ ಗಡಿಯಿಂದ ಕೇವಲ 20 ಕಿಲೋಮೀಟರ್ ಅಂತರದಲ್ಲಿ ನಡೆಯಲಿರುವ ಈ ತಾಲೀಮಿನಲ್ಲಿ ರಫೇಲ್, ಸುಖೋಯ್-30 ಮತ್ತು ತೇಜಸ್ ಸೇರಿದಂತೆ ಹಲವು ಯುದ್ಧ ವಿಮಾನಗಳು ಭಾಗವಹಿಸಲಿವೆ.