ಸಚಿವ ಬಿ. ನಾಗೇಂದ್ರ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ–ಜೆಡಿಎಸ್ ಸದಸ್ಯರು ನಿರಂತರ ಧರಣಿ ನಡೆಸುತ್ತಿರುವ ಮಧ್ಯೆಯೇ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಕೃಷ್ಣ ಬೈರೇಗೌಡ ಅವರು ವಿಧಾನಸಭೆಯಲ್ಲಿ ಮೂರು ಮಸೂದೆಗಳನ್ನು ಮಂಡಿಸಿದರು.
ಅಪಾರ್ಟ್‌ಮೆಂಟ್‌ನ ಮಾಲೀಕತ್ವ ಮತ್ತು ನಿರ್ವಹಣೆಗಾಗಿ ‘ಕರ್ನಾಟಕ ಅಪಾರ್ಟ್‌ಮೆಂಟ್ (ಮಾಲೀಕತ್ವ ಮತ್ತು ನಿರ್ವಹಣೆ) ಮಸೂದೆ’ಯನ್ನು ಸಿದ್ಧಪಡಿಸಲಾಗಿದೆ.
ನಗರ ಪ್ರದೇಶಗಳ ಯಾವುದೇ ಖಾಸಗಿ ರಸ್ತೆಯನ್ನು ಸಾರ್ವಜನಿಕ ರಸ್ತೆಯಾಗಿ ಘೋಷಿಸಲು ‘ಕರ್ನಾಟಕ ಮುನ್ಸಿಪಾಲಿಟಿಗಳ ಮಸೂದೆ’ ಹಾಗೂ ಕರ್ನಾಟಕ ನಗರ ಪಾಲಿಕೆಗಳ ಮಸೂದೆಗಳಿಗೆ ತಿದ್ದುಪಡಿ ತರಲಾಗಿದೆ.