
ಮಹಾರಾಷ್ಟ್ರ ನವನಿರ್ಮಾಣ ಸೇನೆ (MNS) ಮುಖ್ಯಸ್ಥ ರಾಜ್ ಠಾಕ್ರೆ ಅವರನ್ನು ಸಾಮಾಜಿಕ ಜಾಲತಾಣದ ರೀಲ್ಸ್ನಲ್ಲಿ ಅಣಕಿಸಿದ್ದ ಇನ್ಫ್ಲುಯೆನ್ಸರ್ ಮಹೇಶ್ ಮೋಟೆ ಅವರಿಗೆ ಎಂಎನ್ಎಸ್ ಕಾರ್ಯಕರ್ತರು ಪುಣೆಯಲ್ಲಿ ಹಲ್ಲೆ ನಡೆಸಿ ಅವಮಾನಿಸಿದ್ದಾರೆ.
ಮಹೇಶ್ ಮೋಟೆ ಸುಮಾರು 15 ದಿನಗಳ ಹಿಂದೆ ಇನ್ಸ್ಟಾಗ್ರಾಮ್ ರೀಲ್ನಲ್ಲಿ ರಾಜ್ ಠಾಕ್ರೆ ಮತ್ತು ಪಕ್ಷದ ಮುಖಂಡರ ವಿರುದ್ಧ ಆಕ್ಷೇಪಾರ್ಹ ಹಾಗೂ ನಿಂದನೀಯ ಭಾಷೆ ಬಳಸಿದ್ದರು ಎಂದು ಎಂಎನ್ಎಸ್ ಮುಖಂಡರು ತಿಳಿಸಿದ್ದಾರೆ.
ಮೋಟೆ ಅವರ ಮುಖಕ್ಕೆ ಕಪ್ಪು ಮಸಿ ಬಳಿದು, ತಲೆಯ ಮೇಲೆ ಚಪ್ಪಲಿಗಳನ್ನು ಇಟ್ಟು ರಾಜ್ ಠಾಕ್ರೆ ಭಾವಚಿತ್ರದ ಮುಂದೆ ಬೇಷರತ್ ಕ್ಷಮೆ ಕೋರುವಂತೆ ಬಲವಂತಪಡಿಸಲಾಗಿದೆ.