
ನಟ ದರ್ಶನ್ ಅವರ ಅಭಿಮಾನಿ ಚೇತನ್ ಗೌಡ ಅವರು 'ದೇವಿ' ಚಿತ್ರದ ಮೂಲಕ ನಾಯಕನಾಗಿ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ.
ಬೆಂಗಳೂರಿನ ಆಕಾಶ್ ಚಿತ್ರಮಂದಿರದ ಮುಂದೆ ದರ್ಶನ್ ಅವರ 50 ಅಡಿ ಎತ್ತರದ ಕಟೌಟ್ ಬಳಿ ಚಿತ್ರದ ಸಾಹಸ ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ.
ಈ ಚಿತ್ರದಲ್ಲಿ ಭವ್ಯ ಗೌಡ ನಾಯಕಿಯಾಗಿ ನಟಿಸುತ್ತಿದ್ದು, ಶರತ್ ಬಾಬು ಮುಖ್ಯ ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.