
ಆಸ್ಕರ್ ಪ್ರಶಸ್ತಿಯ ಅತ್ಯುತ್ತಮ ಅಂತಾರಾಷ್ಟ್ರೀಯ ಫೀಚರ್ ಫಿಲ್ಮ್ ವಿಭಾಗಕ್ಕೆ ಭಾರತದಿಂದ ಅರ್ಜಿ ಸಲ್ಲಿಸಬೇಕಿದ್ದ ಗಡುವನ್ನು ತಪ್ಪಿಸಿಕೊಂಡಿರುವುದಾಗಿ 'ಹನುಮಾನ್ ಅಂಶ್' ಚಿತ್ರದ ನಿರ್ಮಾಪಕಿ ನಮ್ರತಾ ಸಿಂಗ್ ಸ್ಪಷ್ಟಪಡಿಸಿದ್ದಾರೆ.
ಚಿತ್ರದ ಅಂತಾರಾಷ್ಟ್ರೀಯ ಬಿಡುಗಡೆ ಮತ್ತು ತೆಲುಗು ಡಬ್ಬಿಂಗ್ ಕೆಲಸಗಳಲ್ಲಿ ಬ್ಯುಸಿಯಾಗಿದ್ದರಿಂದ ಗಡುವಿನ ಅರಿವಿರಲಿಲ್ಲ ಎಂದು ಅವರು ತಿಳಿಸಿದ್ದಾರೆ.
ಕೇವಲ 2 ಕೋಟಿ ರೂ. ಬಜೆಟ್ನಲ್ಲಿ ನಿರ್ಮಾಣವಾದ ಈ ಆಧ್ಯಾತ್ಮಿಕ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ 205 ಕೋಟಿ ರೂ.ಗೂ ಅಧಿಕ ಗಳಿಕೆ ಕಂಡಿದೆ.