Education
ಶಿಕ್ಷಣ ಮತ್ತು ಸಂಶೋಧನಾ ಕ್ಷೇತ್ರಗಳ ಸಹಯೋಗಕ್ಕಾಗಿ ಧಾರವಾಡ-ಮದ್ರಾಸ್ ಐಐಟಿಗಳ ನಡುವೆ ಒಪ್ಪಂದ

ಶಿಕ್ಷಣ ಮತ್ತು ಸಂಶೋಧನಾ ಕ್ಷೇತ್ರಗಳ ಸಹಯೋಗಕ್ಕಾಗಿ ಧಾರವಾಡ-ಮದ್ರಾಸ್ ಐಐಟಿಗಳ ನಡುವೆ ಒಪ್ಪಂದ

tv9kannada2h
THE BRIEF
1

ಶಿಕ್ಷಣ, ಸಂಶೋಧನೆ ಮತ್ತು ಉದ್ಯಮಶೀಲತಾ ಕ್ಷೇತ್ರಗಳ ಸಹಯೋಗಕ್ಕಾಗಿ ಐಐಟಿ ಮದ್ರಾಸ್ ಮತ್ತು ಧಾರವಾಡ ಐಐಟಿ ನಡುವೆ ಒಪ್ಪಂದ ಏರ್ಪಟ್ಟಿದ್ದು, ಕೇಂದ್ರ ಶಿಕ್ಷಣ ಸಚಿವ ಪ್ರಲ್ಹಾದ್ ಜೋಶಿ ಅವರ ಸಮ್ಮುಖದಲ್ಲಿ ಉಭಯ ಸಂಸ್ಥೆಗಳು ಇಂದು ಸಹಿ ಹಾಕಿವೆ.

2

ಈ ಪಾಲುದಾರಿಕೆಯು ಅಧ್ಯಾಪಕರು ಮತ್ತು ವಿದ್ಯಾರ್ಥಿಗಳ ವಿನಿಮಯದ ಜತೆಗೆ ಪ್ರಯೋಗಾಲಯ, ಗ್ರಂಥಾಲಯ ಹಾಗೂ ಸಂಶೋಧನಾ ಪರಿಕರಗಳಂತಹ ಸಾಂಸ್ಥಿಕ ಸಂಪನ್ಮೂಲಗಳನ್ನು ಹಂಚಿಕೊಳ್ಳಲು ನೆರವಾಗಲಿದೆ ಎಂದು ಸಚಿವರು ತಿಳಿಸಿದ್ದಾರೆ.

3

ಉಭಯ ಸಂಸ್ಥೆಗಳ ಶೈಕ್ಷಣಿಕ ಪ್ರಕಟಣೆಗಳು ಮತ್ತು ಸಂಶೋಧನಾ ವರದಿಗಳ ವಿನಿಮಯವು ಜ್ಞಾನ ಹಂಚಿಕೆಯನ್ನು ಬಲಪಡಿಸುವುದಲ್ಲದೆ, ಜಂಟಿ ಕಾರ್ಯಾಗಾರ ಮತ್ತು ಸಮ್ಮೇಳನಗಳನ್ನು ಆಯೋಜಿಸಲು ಸಹಕಾರಿಯಾಗಲಿದೆ.