
ಬರೋಬ್ಬರಿ 143 ವರ್ಷಗಳ ಬಳಿಕ ಏಷ್ಯನ್ ಸಿಂಹಗಳು ಗುಜರಾತ್‌ನ ಬರ್ಡಾ ಅರಣ್ಯಕ್ಕೆ ಮರಳಿರುವುದು ವನ್ಯಜೀವಿ ಸಂರಕ್ಷಣೆಯ ಮಹತ್ವದ ಬೆಳವಣಿಗೆಯಾಗಿದೆ.
ಸಿಂಹಗಳಿಗೆ ಸುರಕ್ಷಿತ ಆವಾಸ ಮತ್ತು ಆಡಳಿತ ವ್ಯವಸ್ಥೆಯನ್ನು ಬಲಪಡಿಸಲು ಗುಜರಾತ್ ಸರ್ಕಾರ ಪೋರ್‌ಬಂದರ್ ಅರಣ್ಯ ವಿಭಾಗವನ್ನು ಪುನರ್ರಚಿಸಿ 7 ರೇಂಜ್‌ಗಳನ್ನು ರಚಿಸಿದೆ.
ಈ ಸಂಪೂರ್ಣ ವಿಭಾಗವು ಇಬ್ಬರು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳ ನೇತೃತ್ವದಲ್ಲಿ ಜುನಾಗಢ್ ವನ್ಯಜೀವಿ ವೃತ್ತದ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸಲಿದೆ.