
ರಷ್ಯಾ ವಿರುದ್ಧದ ಯುದ್ಧದ ವೆಚ್ಚ ಭರಿಸಲು ಉಕ್ರೇನ್ ಸರ್ಕಾರವು ಅಶ್ಲೀಲ ಚಿತ್ರಗಳ ಉದ್ಯಮವನ್ನು ಸಕ್ರಮಗೊಳಿಸಿ ತೆರಿಗೆ ವಿಧಿಸುವ ಮೂಲಕ ವಾರ್ಷಿಕ 236 ಕೋಟಿ ರೂ. ಆದಾಯ ಗಳಿಸಲು ಯೋಜನೆ ರೂಪಿಸಿದೆ.
ಈ ತೆರಿಗೆ ಹಣವನ್ನು ರಕ್ಷಣಾ ವಲಯಕ್ಕೆ ಬಳಸಲು ನಿರ್ಧರಿಸಿರುವ ಉಕ್ರೇನ್, ಮುಖ್ಯವಾಗಿ 30 ಸಾವಿರ ಡ್ರೋನ್‌ಗಳನ್ನು ಖರೀದಿಸುವ ಗುರಿ ಹೊಂದಿದೆ.
ಇತ್ತ ರಷ್ಯಾದಲ್ಲಿ ಭಾರತೀಯ ಪ್ರಜೆ ಚಂದನ್ ಗುಪ್ತಾ ಬಂಧನಕ್ಕೊಳಗಾಗಿದ್ದು, ಅವರನ್ನು ಬಲವಂತವಾಗಿ ಸೇನೆಗೆ ಸೇರಿಸುವ ಸಂಚು ನಡೆದಿದೆ ಎಂದು ಪತ್ನಿ ಸ್ನೇಹಾ ಗುಪ್ತಾ ಆರೋಪಿಸಿದ್ದಾರೆ.