
ಅಫ್ಘಾನಿಸ್ತಾನ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಮೊದಲ ಓವರ್ನಲ್ಲಿ ಮೇಡನ್ ಎಸೆದ ಟೀಂ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ, ಅಂತರರಾಷ್ಟ್ರೀಯ ಟಿ20ಯಲ್ಲಿ ಅತಿ ಹೆಚ್ಚು ಮೇಡನ್ ಓವರ್ಗಳನ್ನು ಬೌಲ್ ಮಾಡಿದ ವಿಶ್ವ ದಾಖಲೆ ನಿರ್ಮಿಸಿದರು.
ಬುಮ್ರಾ ಒಟ್ಟು 13 ಮೇಡನ್ ಓವರ್ಗಳನ್ನು ಎಸೆದಿದ್ದು, ಈ ಮೂಲಕ 12 ಮೇಡನ್ ಓವರ್ಗಳೊಂದಿಗೆ ಜಂಟಿ ಮೊದಲ ಸ್ಥಾನದಲ್ಲಿದ್ದ ಜಿಂಬಾಬ್ವೆಯ ರಿಚರ್ಡ್ ನ್ಗಾರವಾ ಅವರ ದಾಖಲೆಯನ್ನು ಹಿಂದಿಕ್ಕಿದ್ದಾರೆ.
ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡ ಭಾರತ ತಂಡಕ್ಕೆ ಬುಮ್ರಾ ಅದ್ಭುತ ಆರಂಭ ಒದಗಿಸಿದ್ದು, ಎದುರಾಳಿ ನಾಯಕ ಇಬ್ರಾಹಿಂ ಜದ್ರಾನ್ ಖಾತೆ ತೆರೆಯಲು ಸಾಧ್ಯವಾಗಲಿಲ್ಲ.