ಬೆಳ್ಳಂದೂರಿನಲ್ಲಿ ಬಾಂಗ್ಲಾದೇಶ ಮೂಲದ ದಂಪತಿಯ ಪೌರತ್ವ ಪ್ರಶ್ನಿಸಿ ಹಲ್ಲೆ ನಡೆಸಿದ ಆರೋಪದ ಮೇಲೆ ಬಂಧಿತರಾಗಿದ್ದ ಡಾ. ನಾಗೇಂದ್ರ ಅವರಿಗೆ ನ್ಯಾಯಾಲಯ ಜಾಮೀನು ನೀಡಿದೆ.
ನಸ್ರೀನಾ ಬಿಲಾಲ್ ಮತ್ತು ಮಹಮ್ಮದ್ ಬಿಲಾಲ್ ದಂಪತಿ ಮೇಲೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ವೈದ್ಯ ನಾಗೇಂದ್ರ ಅವರನ್ನು ಬೆಳ್ಳಂದೂರು ಠಾಣೆ ಪೊಲೀಸರು ಬಂಧಿಸಿದ್ದರು.
ಮತ್ತೊಂದೆಡೆ, ಪರಪ್ಪನ ಅಗ್ರಹಾರದಲ್ಲಿ ಪತಿಯ ವರದಕ್ಷಿಣೆ ಕಿರುಕುಳ ಮತ್ತು ಅನೈತಿಕ ಸಂಬಂಧದಿಂದ ಬೇಸತ್ತು ಸಾನಿಕ ಗೌಡ (20) ಎಂಬ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದು, ಪತಿ ನಾಗರಾಜ್ ವಿರುದ್ಧ ಪ್ರಕರಣ ದಾಖಲಾಗಿದೆ.