
ಯುನೈಟೆಡ್ ಲಿಬರೇಷನ್ ಕೌನ್ಸಿಲ್ ಎಂಬ ಸಂಘಟನೆ ಆನ್‌ಲೈನ್ ಮೂಲಕ ಕಾಶ್ಮೀರಿ ಪಂಡಿತ್ ಸರ್ಕಾರಿ ನೌಕರರಿಗೆ ಬೆದರಿಕೆ ಪತ್ರ ರವಾನಿಸಿದ್ದು, ಕಣಿವೆಯಲ್ಲಿ ಆತಂಕ ಮೂಡಿದೆ.
ಬೆದರಿಕೆ ಪತ್ರದಲ್ಲಿ ಹೆಸರಿಸಲಾದ ನೌಕರರಿಗೆ ಆಗಸ್ಟ್ 20ರವರೆಗೆ ಜಾಗರೂಕರಾಗಿರಲು ಮತ್ತು ಕೆಲಸದ ಸ್ಥಳದಿಂದ ದೂರವಿರಲು ಮೌಖಿಕವಾಗಿ ಸೂಚನೆ ನೀಡಲಾಗಿದೆ.
ಪ್ರಧಾನ ಮಂತ್ರಿಗಳ ವಿಶೇಷ ಪುನರ್ವಸತಿ ಪ್ಯಾಕೇಜ್ ಅಡಿಯಲ್ಲಿ ಸುಮಾರು 9,000 ನೌಕರರು ಕಣಿವೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, 2022ರ ಸರಣಿ ದಾಳಿಯ ಭೀತಿ ಮರುಕಳಿಸಿದೆ.