
ರಾಜ್ಯದ ಕಾವೇರಿ ಮತ್ತು ಕೃಷ್ಣಾ ಜಲಾನಯನ ಪ್ರದೇಶಗಳಲ್ಲಿ ಉತ್ತಮ ಮಳೆಯಾಗುತ್ತಿದ್ದು, ವಿಜಯಪುರದ ಆಲಮಟ್ಟಿ ಮತ್ತು ಯಾದಗಿರಿಯ ನಾರಾಯಣಪುರ ಜಲಾಶಯಗಳು ಬಹುತೇಕ ಭರ್ತಿಯಾಗಿವೆ.
ಆಗಸ್ಟ್ 14ರಂದು ಕೆಆರ್ಎಸ್ ಜಲಾಶಯದಲ್ಲಿ 109.80 ಅಡಿ ನೀರಿದ್ದು, 31.521 ಟಿಎಂಸಿ ಸಂಗ್ರಹದೊಂದಿಗೆ ಶೇ.63.739ರಷ್ಟು ಭರ್ತಿಯಾಗಿದೆ.
ತುಂಗಭದ್ರಾ ಜಲಾಶಯವು ಶೇ.84.548ರಷ್ಟು ಭರ್ತಿಯಾಗಿದ್ದು, 89.442 ಟಿಎಂಸಿ ನೀರು ಸಂಗ್ರಹವಾಗಿದೆ ಎಂದು ವರದಿಯಾಗಿದೆ.