
ವಿಶ್ವಬ್ಯಾಂಕ್ ವರದಿಯ ಪ್ರಕಾರ, ಭಾರತದಲ್ಲಿ 2011ರಿಂದ 2023ರವರೆಗೆ 12 ವರ್ಷಗಳ ಅವಧಿಯಲ್ಲಿ 49.6 ಕೋಟಿ ಜನರು ಬಡತನ ರೇಖೆಯಿಂದ ಮೇಲೇರಿದ್ದಾರೆ.
ದೇಶದಲ್ಲಿ ಬಡವರ ಪ್ರಮಾಣವು 2011-12ರಲ್ಲಿದ್ದ ಶೇ. 57.7ರಿಂದ 2022-23ರ ವೇಳೆಗೆ ಶೇ. 27.1ಕ್ಕೆ ಇಳಿದಿದ್ದು, ಕಡುಬಡವರ ಪ್ರಮಾಣವೂ ಶೇ. 2.6ಕ್ಕೆ ಕುಸಿದಿದೆ.
ಸರ್ಕಾರದ ವಿವಿಧ ಕಲ್ಯಾಣ ಯೋಜನೆಗಳು ಮತ್ತು ಡಿಜಿಟಲ್ ಸುಧಾರಣೆಗಳು ಈ ಬಡತನ ನಿರ್ಮೂಲನೆಗೆ ಪ್ರಮುಖವಾಗಿ ನೆರವಾಗಿವೆ ಎಂದು ವರದಿಯಲ್ಲಿ ತಿಳಿಸಲಾಗಿದೆ.