
ವಿಶ್ವದ ಪ್ರಮುಖ ತಂತ್ರಜ್ಞಾನ ಕಂಪನಿ ಆಲ್ಫಬೆಟ್ ಷೇರುಬೆಲೆ ಒಂದೇ ದಿನದಲ್ಲಿ ಶೇ. 13ರಷ್ಟು ಕುಸಿದಿದ್ದು, ಮಾರುಕಟ್ಟೆ ಬಂಡವಾಳದಲ್ಲಿ 500 ಬಿಲಿಯನ್ ಡಾಲರ್ ಸಂಪತ್ತು ನಶಿಸಿದೆ.
ನಿರೀಕ್ಷೆಗಿಂತ ಕಡಿಮೆ ಆದಾಯ ಹಾಗೂ ಡಾಟಾ ಸೆಂಟರ್ ಮತ್ತು ಚಿಪ್ಸ್ ನಿರ್ಮಾಣದ ಮೇಲಿನ ಭಾರೀ ವೆಚ್ಚದಿಂದಾಗಿ ಕಂಪನಿಯ ಫ್ರೀ ಕ್ಯಾಷ್ ಫ್ಲೋ ನೆಗಟಿವ್ ಆಗಿದೆ.
ಆಲ್ಫಬೆಟ್ನ ಕ್ಲೌಡ್ ಬ್ಯುಸಿನೆಸ್ ಆದಾಯ 30 ಬಿಲಿಯನ್ ಡಾಲರ್ ದಾಟಿದ್ದು, ಜೆಮಿನೈ ಎಐ ಆ್ಯಪ್ನ ಸಕ್ರಿಯ ಬಳಕೆದಾರರ ಸಂಖ್ಯೆ 100 ಕೋಟಿ ಮೈಲಿಗಲ್ಲು ದಾಟಿದೆ.