
ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯು ತನ್ನ 50ನೇ ವರ್ಷದ ಸುವರ್ಣ ಮಹೋತ್ಸವದ ನೆನಪಿನಲ್ಲಿ ಬಡ ಮಹಿಳೆಗೆ ಸುಸಜ್ಜಿತ ಮನೆಯನ್ನು ನಿರ್ಮಿಸಿಕೊಟ್ಟಿದೆ.
ಹರಿದ ಟಾರ್ಪಾಲಿನ್ ಗುಡಿಸಲಿನಲ್ಲಿ ವಾಸಿಸುತ್ತಿದ್ದ ಭಾಗಿ ಎಂಬುವವರಿಗೆ ಸ್ಥಳೀಯ ಸಂಘ-ಸಂಸ್ಥೆಗಳು ಮತ್ತು ದಾನಿಗಳ ಸಹಕಾರದಿಂದ ಸೂರು ಕಲ್ಪಿಸಲಾಗಿದೆ.
ಸುಮಾರು ₹10 ಲಕ್ಷ ವೆಚ್ದಲ್ಲಿ ನಿರ್ಮಿಸಲಾದ ಈ ಹೊಸ ಮನೆಯ ಕೀಲಿಕೈಯನ್ನು ಸೆಪ್ಟೆಂಬರ್ 10ರಂದು ಹಸ್ತಾಂತರಿಸಲಾಗಿದೆ.