
ರಜನೀಕಾಂತ್ ನಟನೆಯ ಬಹುನಿರೀಕ್ಷಿತ ‘ಜೈಲರ್ 2’ ಸಿನಿಮಾ ಅಕ್ಟೋಬರ್ 15ರಂದು ಬಿಡುಗಡೆಯಾಗುತ್ತಿದ್ದು, ಈಗಾಗಲೇ ಮುಂಗಡ ಬುಕಿಂಗ್‌ನಿಂದಲೇ 30 ಕೋಟಿ ರೂ.ಗಳಿಗೂ ಅಧಿಕ ಗಳಿಕೆ ಮಾಡಿದೆ.
ಬೆಂಗಳೂರಿನಲ್ಲಿ ಅಕ್ಟೋಬರ್ 15ರ ಬೆಳಿಗ್ಗೆ 6 ಗಂಟೆಯ ವಿಶೇಷ ಶೋಗೆ ಕನಿಷ್ಠ ಟಿಕೆಟ್ ದರ 900 ರೂ.ಗಳಿದ್ದು, ಕೆಲವು ಕಡೆ 2,000 ರೂ.ಗಳಿಗೂ ಅಧಿಕವಿದೆ.
ಚೆನ್ನೈಗೆ ಹೋಲಿಸಿದರೆ ಬೆಂಗಳೂರಿನಲ್ಲಿ ಚಿತ್ರದ ಟಿಕೆಟ್ ದರ ಸುಮಾರು 15 ಪಟ್ಟು ಹೆಚ್ಚಾಗಿದ್ದು, ನೆಲ್ಸನ್ ನಿರ್ದೇಶನದ ಈ ಚಿತ್ರದಲ್ಲಿ ಹಲವು ಭಾಷೆಗಳ ತಾರೆಯರು ನಟಿಸಿದ್ದಾರೆ.