
ನೂತನವಾಗಿ ಆಯ್ಕೆಯಾದ ಐಪಿಎಸ್ ತರಬೇತಿ ಅಧಿಕಾರಿಗಳನ್ನು ರಾಜ್ಯ ಕೇಡರ್‌ಗಳಿಗೆ ಕಳುಹಿಸುವ ಮುನ್ನ ಕೇಂದ್ರ ಗೃಹ ಸಚಿವಾಲಯಕ್ಕೆ ನಿಯೋಜಿಸುವ ಹೊಸ ವ್ಯವಸ್ಥೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ.
78ನೇ ನಿಯಮಿತ ನೇಮಕಾತಿ ಬ್ಯಾಚ್‌ನಲ್ಲಿ ಒಟ್ಟು 151 ತರಬೇತಿ ಅಧಿಕಾರಿಗಳಿದ್ದು, ಇದರಲ್ಲಿ ಭಾರತದ 135 ಅಧಿಕಾರಿಗಳು ಹಾಗೂ ನೇಪಾಳ, ಭೂತಾನ್ ಮತ್ತು ಮಾಲ್ಡೀವ್ಸ್‌ನ 16 ವಿದೇಶಿ ಅಧಿಕಾರಿಗಳು ಸೇರಿದ್ದಾರೆ.
ಹೈದರಾಬಾದ್‌ನ ಸರ್ದಾರ್ ವಲ್ಲಭಭಾಯಿ ಪಟೇಲ್ ರಾಷ್ಟ್ರೀಯ ಪೊಲೀಸ್ ಅಕಾಡೆಮಿಯಲ್ಲಿ ಮೊದಲ ಹಂತದ ತರಬೇತಿ ಪೂರ್ಣಗೊಳಿಸಿರುವ ಈ ಅಧಿಕಾರಿಗಳಿಗಾಗಿ ದೆಹಲಿಯ ವಿಜ್ಞಾನ ಭವನದಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದೆ.