
ಬೆಂಗಳೂರು, ಹೈದರಾಬಾದ್, ಅಮರಾವತಿ ಮತ್ತು ಚೆನ್ನೈ ಸಂಪರ್ಕಿಸುವ ಪ್ರಸ್ತಾವಿತ ದಕ್ಷಿಣ ಭಾರತದ ಬುಲೆಟ್ ಟ್ರೈನ್ ಯೋಜನೆಗೆ ಕನ್ನಡಿಗರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.
ಈ ಯೋಜನೆಯು ಕೇವಲ ಆಂಧ್ರಪ್ರದೇಶ ಹಾಗೂ ಅನ್ಯ ರಾಜ್ಯಗಳಿಗೆ ಲಾಭ ತರಲಿದ್ದು, ಕರ್ನಾಟಕಕ್ಕೆ ಹೆಚ್ಚಿನ ಪ್ರಯೋಜನವಿಲ್ಲ ಎಂದು ಕನ್ನಡಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನ ಉಪನಗರ ರೈಲು ಮತ್ತು ಮೆಟ್ರೋ ಕಾಮಗಾರಿಗಳು ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಚೆನ್ನೈ ಅಥವಾ ಹೈದರಾಬಾದ್ ಮಾರ್ಗಗಳ ಬದಲಿಗೆ ರಾಜ್ಯದೊಳಗಿನ ಮಾರ್ಗಗಳು ಬೇಕೆಂದು ಒತ್ತಾಯಿಸಿದ್ದಾರೆ.