
ಆಂಧ್ರಪ್ರದೇಶದ ತಿರುಪತಿಯ ದಾಸರಿ ಇಂದುಮತಿ ಅವರು ಯುಪಿಎಸ್ಸಿ ನಡೆಸಿದ ಇಂಡಿಯನ್ ಇಂಜಿನಿಯರಿಂಗ್ ಸರ್ವಿಸಸ್ ಪರೀಕ್ಷೆಯಲ್ಲಿ ಮೊದಲ ಯತ್ನದಲ್ಲೇ ಅಖಿಲ ಭಾರತ ಮಟ್ಟದಲ್ಲಿ 75ನೇ ರ್ಯಾಂಕ್ ಗಳಿಸಿ ಸಾಧನೆ ಮಾಡಿದ್ದಾರೆ.
ಲಾರಿ ಚಾಲಕರ ಮಗಳಾದ ಇಂದುಮತಿ ಅವರು ಇಂಜಿನಿಯರಿಂಗ್ನಲ್ಲಿ ಚಿನ್ನದ ಪದಕ ಪಡೆದು ಬೋಸ್ಟನ್ ಮೂಲದ ಸಾಫ್ಟ್ವೇರ್ ಕಂಪನಿಯಲ್ಲಿ ವರ್ಷಕ್ಕೆ 10 ಲಕ್ಷ ರೂ. ವೇತನದ ಉದ್ಯೋಗದಲ್ಲಿದ್ದರು.
ದೇಶಸೇವೆಯ ದೊಡ್ಡ ಕನಸಿಗಾಗಿ ಲಕ್ಷಾಂತರ ರೂಪಾಯಿ ಸಂಬಳದ ಸಾಫ್ಟ್ವೇರ್ ಉದ್ಯೋಗವನ್ನು ತೊರೆದು ಅವರು ದೆಹಲಿಗೆ ತೆರಳಿ ಯುಪಿಎಸ್ಸಿ ಪರೀಕ್ಷೆಗೆ ಸಿದ್ಧತೆ ನಡೆಸಿದ್ದರು.