
ದಸರಾ ರಜಾ ದಿನಗಳನ್ನು ಮುಗಿಸಿ ಜನರು ಬೆಂಗಳೂರಿನತ್ತ ವಾಪಸ್ ಆಗುತ್ತಿರುವುದರಿಂದ ನಗರದ ಪ್ರವೇಶ ಮಾರ್ಗಗಳಲ್ಲಿ ಭಾರಿ ವಾಹನ ಸಂಚಾರ ದಟ್ಟಣೆ ಉಂಟಾಗಿದೆ.
ಬೆಂಗಳೂರು ಹೊರಹೊಲಯದ ನೆಲಮಂಗಲ ಬೈಪಾಸ್ ಮತ್ತು ಎನ್‌ಎಚ್ 75 ರಸ್ತೆಯಲ್ಲಿ ಕಿಲೋಮೀಟರ್‌ಗಟ್ಟಲೆ ವಾಹನಗಳು ನಿಂತಿರುವುದರಿಂದ ಪ್ರಯಾಣಿಕರು ಪರದಾಡುತ್ತಿದ್ದಾರೆ.
ಮೈಸೂರು ಮತ್ತು ಮಂಡ್ಯ ಭಾಗದಿಂದ ಬರುತ್ತಿರುವವರಿಂದ ಈ ದಟ್ಟಣೆ ಉಂಟಾಗಿದ್ದು, ಅಕ್ಟೋಬರ್ 22ರ ನಸುಕಿನಿಂದ ಉತ್ತರ ಕರ್ನಾಟಕದಿಂದ ಬಸ್‌ಗಳು ಬರುವುದರಿಂದ ದಟ್ಟಣೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ.