Health & Environment
ರಾಷ್ಟ್ರೀಯ ಹೆದ್ದಾರಿ ಅಪಘಾತ ಸ್ಥಳಕ್ಕೆ 10 ನಿಮಿಷದಲ್ಲಿ ಆಂಬುಲೆನ್ಸ್ ತಲುಪಲು NHAI ಗಡುವು

ರಾಷ್ಟ್ರೀಯ ಹೆದ್ದಾರಿ ಅಪಘಾತ ಸ್ಥಳಕ್ಕೆ 10 ನಿಮಿಷದಲ್ಲಿ ಆಂಬುಲೆನ್ಸ್ ತಲುಪಲು NHAI ಗಡುವು

prajavani2h
THE BRIEF
1

ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅಪಘಾತ ನಡೆದ ಸ್ಥಳಕ್ಕೆ 10 ನಿಮಿಷಗಳ ಒಳಗಾಗಿ ಆಂಬುಲೆನ್ಸ್ ತಲುಪದಿದ್ದರೆ ₹10 ಸಾವಿರ ದಂಡ ವಿಧಿಸುವ ಹೊಸ ನಿಯಮವನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಜಾರಿಗೊಳಿಸಿದೆ.

2

ಮಾಹಿತಿ ಸಿಕ್ಕಿದ ಒಂದು ಗಂಟೆಯೊಳಗೆ ಅಪಘಾತಕ್ಕೀಡಾದವರನ್ನು ಹತ್ತಿರದ ಆಸ್ಪತ್ರೆಗೆ ತಲುಪಿಸದಿದ್ದರೆ ಅಥವಾ ತುರ್ತು ಕರೆಯನ್ನು ನಿರಾಕರಿಸಿದರೆ ಆಂಬುಲೆನ್ಸ್ ನಿರ್ವಹಣಾ ಸಂಸ್ಥೆಗೆ ₹10 ಸಾವಿರ ದಂಡ ವಿಧಿಸಲಾಗುತ್ತದೆ.

3

ಸುರಕ್ಷತಾ ವ್ಯವಸ್ಥೆಯ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಆಂಬುಲೆನ್ಸ್, ಕ್ರೇನ್ ಮತ್ತು ಗಸ್ತು ವಾಹನಗಳಿಗೆ ಎಐಎಸ್ 140 ವ್ಯವಸ್ಥೆಯುಳ್ಳ ಜಿಪಿಎಸ್ ಸಾಧನಗಳನ್ನು ಅಳವಡಿಸಿ ಆಂಡ್ರಾಯ್ಡ್ ಮೊಬೈಲ್‌ಗಳಿಗೆ ಸಂಪರ್ಕಿಸಲಾಗುತ್ತದೆ.