
ಭಾರತೀಯ ಕರಾವಳಿ ಕಾವಲು ಪಡೆಯು ನಾವಿಕ ಮತ್ತು ಮೆಕ್ಯಾನಿಕ್ ಸೇರಿದಂತೆ ಒಟ್ಟು 365 ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಹೊರಡಿಸಿದೆ.
ಅರ್ಹ ಅಭ್ಯರ್ಥಿಗಳು 10ನೇ ತರಗತಿ, 12ನೇ ತರಗತಿ ಅಥವಾ ಎಂಜಿನಿಯರಿಂಗ್ ಡಿಪ್ಲೊಮಾ ವಿದ್ಯಾರ್ಹತೆ ಹೊಂದಿರಬೇಕಿದ್ದು, ಸಾಮಾನ್ಯ ವರ್ಗಕ್ಕೆ 550 ರೂ. ಅರ್ಜಿ ಶುಲ್ಕವಿದೆ.
ಆನ್‌ಲೈನ್ ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಅಕ್ಟೋಬರ್ 6ರಂದು ಆರಂಭವಾಗಿದ್ದು, ಅಕ್ಟೋಬರ್ 21ರ ಸಂಜೆ 5:30ರವರೆಗೆ ಅವಕಾಶ ನೀಡಲಾಗಿದೆ.