
ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಅವರು ಪ್ರೇಮಾನಂದ ಮಹಾರಾಜ ಸ್ವಾಮೀಜಿಗಳ ಆಶ್ರಮಕ್ಕೆ ಭೇಟಿ ನೀಡಲು ₹5 ಕೋಟಿ ಪಡೆದಿದ್ದಾರೆ ಎಂದು ಶ್ರೀ ಕೃಷ್ಣ ಜನ್ಮಭೂಮಿ ಸಂಘರ್ಷ ನ್ಯಾಸದ ಅಧ್ಯಕ್ಷ ದಿನೇಶ್ ಶರ್ಮಾ (ಫಲಹಾರಿ ಮಹಾರಾಜ್) ಉತ್ತರ ಪ್ರದೇಶದ ಮುಖ್ಯಮಂತ್ರಿಗೆ ಪತ್ರ ಬರೆದು ಆರೋಪಿಸಿದ್ದಾರೆ.
ರಾಜಸ್ಥಾನದ ಬಿಲ್ಡರ್‌ಗಳ ಗ್ರೂಪ್ ಮತ್ತು ಖಾಸಗಿ ಕಂಪನಿಯೊಂದು ಗುರುಗಳ ಜನಪ್ರಿಯತೆ ಹೆಚ್ಚಿಸಲು ಈ ಹಣ ಖರ್ಚು ಮಾಡಿದೆ ಎಂದು ಪತ್ರದಲ್ಲಿ ದೂರಲಾಗಿದೆ.
ಆದರೆ ಈ ಆರೋಪಗಳನ್ನು ವಿರಾಟ್ ಕೊಹ್ಲಿ ಅವರ ವಕ್ತಾರರು ಬಲವಾಗಿ ನಿರಾಕರಿಸಿದ್ದು, ಇವು ಸಂಪೂರ್ಣವಾಗಿ ಸುಳ್ಳು ಮತ್ತು ಆಧಾರರಹಿತ ಎಂದು ಸ್ಪಷ್ಟಪಡಿಸಿದ್ದಾರೆ.