
ಜಾಗತಿಕ ವೆಚ್ಚ ಕಡಿತ ಮತ್ತು ಕಾರ್ಯಾಚರಣೆ ಸರಳೀಕರಣದ ಭಾಗವಾಗಿ ವೋಕ್ಸ್ವ್ಯಾಗನ್ ಸಂಸ್ಥೆಯು 50,000 ಉದ್ಯೋಗಿಗಳನ್ನು ವಜಾಗೊಳಿಸಲು ಮುಂದಾಗಿದ್ದು, 2030ರ ವೇಳೆಗೆ ಒಟ್ಟು ಒಂದು ಲಕ್ಷ ಉದ್ಯೋಗ ಕಡಿತದ ಸಾಧ್ಯತೆಯಿದೆ.
ಕಂಪನಿಯು ತನ್ನ ವಾಹನಗಳ ಮಾಡೆಲ್ ಪೋರ್ಟ್ಫೋಲಿಯೋವನ್ನು ಶೇ. 50 ರಷ್ಟು ಕಡಿತಗೊಳಿಸಲು ನಿರ್ಧರಿಸಿದ್ದು, ಕಡಿಮೆ ಲಾಭದಾಯಕ ಮಾದರಿಗಳನ್ನು ಸ್ಥಗಿತಗೊಳಿಸಿ ವಿದ್ಯುತ್ ಚಾಲಿತ ವಾಹನಗಳ ಮೇಲೆ ಗಮನ ಹರಿಸಲಿದೆ.
ಜಾಗತಿಕ ಮಾರುಕಟ್ಟೆಯಲ್ಲಿನ ತೀವ್ರ ಪೈಪೋಟಿ ಮತ್ತು ಉತ್ಪಾದನಾ ವೆಚ್ಚವನ್ನು ತಗ್ಗಿಸುವ ಒತ್ತಡದಿಂದಾಗಿ ಈ ಕ್ರಮ ಕೈಗೊಳ್ಳಲಾಗಿದ್ದು, ಜರ್ಮನಿಯಲ್ಲಿನ ತನ್ನ ಉತ್ಪಾದನಾ ಘಟಕಗಳಲ್ಲಿ ಈ ಬದಲಾವಣೆಗಳನ್ನು ಜಾರಿಗೆ ತರುತ್ತಿದೆ.