
2027ರ ಏಕದಿನ ವಿಶ್ವಕಪ್‌ಗೆ ಅನುಭವಿ ವೇಗಿ ಭುವನೇಶ್ವರ್ ಕುಮಾರ್ ಅವರನ್ನು ಭಾರತ ತಂಡಕ್ಕೆ ಆಯ್ಕೆ ಮಾಡಬೇಕೆಂದು ರವಿಚಂದ್ರನ್ ಅಶ್ವಿನ್ ಬಿಸಿಸಿಐಗೆ ಸಲಹೆ ನೀಡಿದ್ದಾರೆ.
ಐಪಿಎಲ್ 2026ರಲ್ಲಿ 16 ಪಂದ್ಯಗಳಲ್ಲಿ 28 ವಿಕೆಟ್ ಪಡೆದು ಮಿಂಚಿದ್ದ 36 ವರ್ಷದ ಭುವನೇಶ್ವರ್, ದಕ್ಷಿಣ ಆಫ್ರಿಕಾದ ಪಿಚ್‌ಗಳಲ್ಲಿ ಸ್ವಿಂಗ್ ಬೌಲಿಂಗ್‌ಗೆ ಅತ್ಯಂತ ಸೂಕ್ತ ಎಂದು ಅಶ್ವಿನ್ ಅಭಿಪ್ರಾಯಪಟ್ಟಿದ್ದಾರೆ.
ಭುವನೇಶ್ವರ್ ಕೊನೆಯದಾಗಿ ಜನವರಿ 2022ರಲ್ಲಿ ಏಕದಿನ ಪಂದ್ಯ ಆಡಿದ್ದು, ವಿಶ್ವಕಪ್ ತಂಡದಲ್ಲಿ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಜಸ್ಪ್ರೀತ್ ಬುಮ್ರಾ ಅವರೊಂದಿಗೆ ಇವರನ್ನು ಸೇರಿಸಿಕೊಳ್ಳಲು ಅಶ್ವಿನ್ ಒತ್ತಾಯಿಸಿದ್ದಾರೆ.