
ಚೆನ್ನೈನ ಸೆಮ್ಮಂಚೇರಿಯಲ್ಲಿ ನಡೆದ ಸಭೆಯಲ್ಲಿ ನಟ ಧನುಷ್ ತಮ್ಮ ಧನುಷ್ ನರ್ಪಣಿ ಇಯಕ್ಕಂ ಸಂಘಟನೆಯ ಮಹಿಳಾ ಪದಾಧಿಕಾರಿಗಳಿಗೆ ದೀಪಾವಳಿ ಉಡುಗೊರೆಯಾಗಿ ಬೆಳ್ಳಿ ಕಾಮಾಕ್ಷಿ ದೀಪಗಳನ್ನು ವಿತರಿಸಿದ್ದಾರೆ.
ಈ ದೀಪಗಳ ಮೇಲೆ ಕಮಲದ ಚಿಹ್ನೆ ಇರುವುದು ತಮಿಳುನಾಡಿನಲ್ಲಿ ಭಾರಿ ರಾಜಕೀಯ ಚರ್ಚೆಗೆ ಕಾರಣವಾಗಿದ್ದು, ಧನುಷ್ ರಾಜಕೀಯ ಪ್ರವೇಶದ ವದಂತಿಗಳಿಗೆ ಬಲಬಂದಿದೆ.
ಕಾಮಾಕ್ಷಿ ದೀಪದ ಮೇಲಿರುವ ಕಮಲದ ಕೆತ್ತನೆಗೂ ರಾಜಕೀಯಕ್ಕೂ ಯಾವುದೇ ಸಂಬಂಧವಿಲ್ಲ, ಅದು ಜ್ಯುವೆಲ್ಲರಿಯ ಲೋಗೋ ಅಷ್ಟೇ ಎಂದು ಧನುಷ್ ಸಂಘಟನೆಯ ಪದಾಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.