
ಗಾಲೆಯಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ 462 ರನ್ ಗಳಿಸಿದ್ದು, ಶ್ರೀಲಂಕಾವನ್ನು 284 ರನ್‌ಗಳಿಗೆ ಆಲೌಟ್ ಮಾಡುವ ಮೂಲಕ 178 ರನ್ ಮುನ್ನಡೆ ಸಾಧಿಸಿದೆ.
ಶ್ರೀಲಂಕಾ ಪರ ಸೋನಾಲ್ ದಿನುಷಾ ಚೊಚ್ಚಲ ಶತಕ ಸಿಡಿಸಿದರೆ, ಭಾರತದ ಪರ ಮಾನವ್ ಸುತಾರ್ 4 ವಿಕೆಟ್ ಮತ್ತು ರವೀಂದ್ರ ಜಡೇಜಾ 3 ವಿಕೆಟ್ ಪಡೆದು ಮಿಂಚಿದ್ದಾರೆ.
ಈ ಪಂದ್ಯದಲ್ಲಿ ಶ್ರೀಲಂಕಾ ತಂಡವು ನಿರೋಷನ್ ಡಿಕ್ವೆಲ್ಲಾ ಅವರ 80 ರನ್ ನೆರವಿನಿಂದ ಫಾಲೋ ಆನ್ ಭೀತಿಯಿಂದ ಪಾರಾಗಿದೆ.