
2027ರ ಏಕದಿನ ವಿಶ್ವಕಪ್‌ಗೆ ಐಸಿಸಿ ಪರಿಚಯಿಸಿರುವ ಹೊಸ 'ಪ್ಲೇ-ಇನ್' ಮಾದರಿಯನ್ನು ಕ್ರಿಕೆಟ್ ಸ್ಕಾಟ್‌ಲ್ಯಾಂಡ್ ಮತ್ತು ರಾಯಲ್ ಡಚ್ ಕ್ರಿಕೆಟ್ ಅಸೋಸಿಯೇಷನ್ ಜಂಟಿಯಾಗಿ ವಿರೋಧಿಸಿವೆ.
ಹೊಸ ನಿಯಮದ ಪ್ರಕಾರ, ಅರ್ಹತೆ ಪಡೆಯುವ 14 ತಂಡಗಳಲ್ಲಿ ಕೊನೆಯ 3 ತಂಡಗಳು ಸೂಪರ್ ಸಿರೀಸ್ ಆಡಬೇಕು ಮತ್ತು ಅದರಲ್ಲಿ ಗೆಲ್ಲುವ ಕೇವಲ ಒಂದು ತಂಡ ಮಾತ್ರ ಮುಖ್ಯ ಹಂತಕ್ಕೆ ಪ್ರವೇಶಿಸಲಿದೆ.
ವಿಶ್ವಕಪ್‌ಗೆ 18 ತಿಂಗಳು ಬಾಕಿ ಇರುವಾಗ ಈ ಏಕಪಕ್ಷೀಯ ನಿರ್ಧಾರ ಕೈಗೊಂಡಿರುವುದು ಉದಯೋನ್ಮುಖ ತಂಡಗಳ ಅವಕಾಶಕ್ಕೆ ಕತ್ತರಿ ಹಾಕುವ ಕ್ರಮ ಎಂದು ಆಟಗಾರರು ಮತ್ತು ಸಂಘಟನೆಗಳು ಟೀಕಿಸಿವೆ.