
ಅಮೆರಿಕದ ಹೃದಯ ಶಸ್ತ್ರಚಿಕಿತ್ಸಕ ಡಾ. ಜೆರೆಮಿ ಲಂಡನ್ ಅವರು ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ಒಂಟಿತನ, ಧೂಮಪಾನ, ಅಲ್ಟ್ರಾ-ಪ್ರೊಸೆಸ್ಡ್ ಆಹಾರ, ದೈಹಿಕ ಚಟುವಟಿಕೆಯ ಕೊರತೆ ಮತ್ತು ದೀರ್ಘಕಾಲದ ಒತ್ತಡದಿಂದ ದೂರವಿರಲು ಎಚ್ಚರಿಸಿದ್ದಾರೆ.
ದೀರ್ಘಕಾಲದ ಒಂಟಿತನ ಮತ್ತು ಸಾಮಾಜಿಕ ಪ್ರತ್ಯೇಕತೆಯು ಮಾನಸಿಕ ಒತ್ತಡವನ್ನು ಹೆಚ್ಚಿಸಿ, ನಿದ್ರೆಯ ಸಮಸ್ಯೆಗಳು ಮತ್ತು ದೈಹಿಕ ಚಟುವಟಿಕೆಯ ಕೊರತೆಯ ಮೂಲಕ ಪರೋಕ್ಷವಾಗಿ ಹೃದಯರೋಗ ಹಾಗೂ ಪಾರ್ಶ್ವವಾಯುವಿನ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಅವರು ವಿವರಿಸಿದ್ದಾರೆ.
ಸಿಗರೇಟ್ನಲ್ಲಿರುವ ನಿಕೋಟಿನ್ ರಕ್ತದೊತ್ತಡವನ್ನು ಹೆಚ್ಚಿಸುವುದರಿಂದ ಧೂಮಪಾನ ಮತ್ತು ವೇಪಿಂಗ್ನಿಂದ ದೂರವಿರಲು ಹಾಗೂ ದಿನನಿತ್ಯ ವಾಕಿಂಗ್, ಸೈಕ್ಲಿಂಗ್ನಂತಹ ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ವೈದ್ಯರು ಸಲಹೆ ನೀಡಿದ್ದಾರೆ.