
ಎಡಪಾದದ ತೀವ್ರ ನೋವಿನ ಕಾರಣದಿಂದಾಗಿ ಜಪಾನ್ನಲ್ಲಿ ಮುಂದಿನ ತಿಂಗಳ 19ರಿಂದ ಆರಂಭವಾಗಲಿರುವ ಏಷ್ಯನ್ ಗೇಮ್ಸ್ ಕ್ರೀಡಾಕೂಟದಿಂದ ಭಾರತದ ಹರ್ಡಲ್ಸ್ ಓಟಗಾರ ತೇಜಸ್ ಶಿರ್ಸೆ ಹೊರಬಿದ್ದಿದ್ದಾರೆ.
ಇತ್ತೀಚೆಗೆ ನಡೆದ ಕಾಮನ್ವೆಲ್ತ್ ಕ್ರೀಡಾಕೂಟದ 110 ಮೀಟರ್ ಹರ್ಡಲ್ಸ್ನಲ್ಲಿ ತೀವ್ರ ನೋವಿನ ನಡುವೆಯೂ ಓಡಿದ್ದ ತೇಜಸ್ ಶಿರ್ಸೆ, 15.39 ಸೆಕೆಂಡುಗಳಲ್ಲಿ ಗುರಿ ತಲುಪಿ ಕೊನೆಯ ಸ್ಥಾನ ಪಡೆದಿದ್ದರು.
ಪದಕ ಹಿಡಿದು ಚಿತ್ರ ಹಾಕಬೇಕಾದ ಜಾಗದಲ್ಲಿ ಎಂಆರ್ಐ ಸ್ಕ್ಯಾನ್ ಪ್ರತಿಗಳನ್ನು ಹಂಚಿಕೊಳ್ಳಬೇಕಾಗಿ ಬಂದಿದೆ ಎಂದು ತೇಜಸ್ ಶಿರ್ಸೆ ತಮ್ಮ ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.