
ನೇಪಾಳದ ಬಜಂಗ್ ಜಿಲ್ಲೆಯ ಸೇತಿ ನದಿಯ ಸೇತುವೆಯ ಮೇಲಿಂದ ಮಹಿಳೆಯೊಬ್ಬಳು ಜೀವಂತ ನಾಯಿಯನ್ನು ರಭಸವಾದ ಪ್ರವಾಹಕ್ಕೆ ಎಸೆದ ಅಮಾನವೀಯ ಘಟನೆ ನಡೆದಿದೆ.
ಸ್ಥಳದಲ್ಲಿದ್ದ ಪಶುವೈದ್ಯ ನಬಿನ್ ಪಾಂಡೆ ತಡೆಯಲು ಯತ್ನಿಸಿದರೂ ಕೇಳದೆ ಮಹಿಳೆ ನಾಯಿಯನ್ನು ಕೆಳಗೆ ತಳ್ಳಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈ ಘಟನೆಯ ಕುರಿತು ಬಜಂಗ್ ಜಿಲ್ಲಾ ಪೊಲೀಸ್ ಕಚೇರಿಯು ತನಿಖೆ ಆರಂಭಿಸಿದ್ದು, ಆರೋಪಿ ಮಹಿಳೆಯನ್ನು ಪತ್ತೆಹಚ್ಚುವ ಕಾರ್ಯ ನಡೆಯುತ್ತಿದೆ.