
ಕರ್ನಾಟಕದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆ ಮುಕ್ತಾಯಗೊಂಡಿದ್ದು, 1,08,31,945 ಎಎಸ್ಡಿಡಿಒ (ASDDO) ಮತದಾರರ ಹೆಸರು ಪಟ್ಟಿಯಿಂದ ಕೈಬಿಡುವ ಸಾಧ್ಯತೆ ಇದೆ.
ಈ ಪ್ರಕ್ರಿಯೆಯಲ್ಲಿ 15,28,985 ನಾಪತ್ತೆಯಾದವರು, 65,61,607 ಸ್ಥಳಾಂತರಗೊಂಡವರು, 16,38,839 ಮೃತಪಟ್ಟವರು ಮತ್ತು 7,07,792 ನಕಲಿ ಮತದಾರರು ಸೇರಿದಂತೆ ಒಟ್ಟು 1.08 ಕೋಟಿ ಹೆಸರುಗಳು ಪರಿಶೀಲನೆಗೆ ಒಳಪಟ್ಟಿವೆ.
ಆಗಸ್ಟ್ 24ರಂದು ಮೊದಲ ಕರಡು ಪಟ್ಟಿ ಪ್ರಕಟವಾಗಲಿದ್ದು, ಮತದಾರರು ಆಗಸ್ಟ್ 24ರಿಂದ ಸೆಪ್ಟೆಂಬರ್ 23ರವರೆಗೆ ಆಕ್ಷೇಪಣೆ ಸಲ್ಲಿಸಲು ಅವಕಾಶವಿದ್ದು, ಅಕ್ಟೋಬರ್ 27ಕ್ಕೆ ಅಂತಿಮ ಪಟ್ಟಿ ಪ್ರಕಟವಾಗಲಿದೆ.