ನವದೆಹಲಿಯ ಭಾರತೀಯ ವಿಜ್ಞಾನ ಮಂದಿರದಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕರ್ನಾಟಕದ ಒಂಬತ್ತು ಸಾಧಕರು ಸೇರಿದಂತೆ ದೇಶದ 115 ಕಲಾವಿದರಿಗೆ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪ್ರದಾನ ಮಾಡಿದರು.
ಕರ್ನಾಟಕದ ಹಿರಿಯ ಮೃದಂಗ ವಾದಕ ಎ.ವಿ.ಆನಂದ್ ಅವರಿಗೆ ಪ್ರತಿಷ್ಠಿತ 'ಅಕಾಡೆಮಿ ರತ್ನ ಪ್ರಶಸ್ತಿ' ಹಾಗೂ ಖ್ಯಾತ ಚಲನಚಿತ್ರ ನಿರ್ದೇಶಕ ಟಿ.ಎಸ್.ನಾಗಾಭರಣ ಅವರಿಗೆ ನಿರ್ದೇಶನ ವಿಭಾಗದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಯಕ್ಷಗಾನ ಕಲಾವಿದ ಕೆರೆಮನೆ ಶಿವಾನಂದ ಹೆಗಡೆ, ಶಾಸ್ತ್ರೀಯ ಸಂಗೀತಗಾರರಾದ ಕೆ.ವಾಗೀಶ್, ಟಿ.ಎಸ್.ಸತ್ಯವತಿ, ಜ್ಯೋತಿ ಹೆಗಡೆ, ಅನೂರು ಅನಂತಕೃಷ್ಣ ಶರ್ಮಾ, ವೀಣಾ ಮೂರ್ತಿ ವಿಜಯ್ ಮತ್ತು ಎಸ್.ಸಿ.ಶರ್ಮಾ ಅವರು ಪ್ರಶಸ್ತಿ ಸ್ವೀಕರಿಸಿದ ಇತರ ಸಾಧಕರಾಗಿದ್ದಾರೆ.