
ಶಬರಿಮಲೆಯ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಭಂಡಾರದಿಂದ ದೇವರಿಗೆ ಅರ್ಪಿಸಲಾಗಿದ್ದ ಅತ್ಯಂತ ಮೌಲ್ಯಯುತ ಬಂಗಾರದ ಕಿರೀಟ ನಾಪತ್ತೆಯಾಗಿದ್ದು, ನಕಲಿ ಕಿರೀಟ ಪತ್ತೆಯಾಗಿದೆ.
ಕೇರಳ ಹೈಕೋರ್ಟ್ ನಿರ್ದೇಶನದಂತೆ ಜಸ್ಟಿಸ್ ಕೆ.ಟಿ. ಶಂಕರನ್ ನೇತೃತ್ವದಲ್ಲಿ ಲೆಕ್ಕಪರಿಶೋಧನೆ ನಡೆಸುವಾಗ ಸೆಪ್ಟೆಂಬರ್ನಲ್ಲಿ ಈ ವಂಚನೆ ಬಯಲಾಗಿದೆ.
ಅಸಲಿ ಕಿರೀಟವು 55.72 ಪವನ್ ತೂಕವಿದ್ದರೆ, ಪ್ರಸ್ತುತ ಇರುವ ಕಿರೀಟವು ಸುಮಾರು 206 ಗ್ರಾಂ ಕಡಿಮೆ ತೂಕ ಹೊಂದಿದ್ದು ತನಿಖೆ ಮುಂದುವರಿದಿದೆ.