
ಇಂಧನ, ವಿದ್ಯುತ್ ಮತ್ತು ಆಹಾರ ಪದಾರ್ಥಗಳ ಬೆಲೆ ಇಳಿಕೆಯಿಂದಾಗಿ ಜುಲೈ ತಿಂಗಳ ಸಗಟು ಬೆಲೆ ಸೂಚ್ಯಂಕ (WPI) ಆಧಾರಿತ ಹಣದುಬ್ಬರವು ಶೇ 9.78ಕ್ಕೆ ಇಳಿಕೆಯಾಗಿದೆ.
ಜೂನ್ ತಿಂಗಳಲ್ಲಿ ಸಗಟು ಹಣದುಬ್ಬರ ದರ ಶೇ 9.87ರಷ್ಟಿತ್ತು, ಇಂಧನ ಮತ್ತು ವಿದ್ಯುತ್ ವಲಯದ ಹಣದುಬ್ಬರವು ಜೂನ್‌ನ ಶೇ 27.41ರಿಂದ ಜುಲೈನಲ್ಲಿ ಶೇ 20.05ಕ್ಕೆ ಇಳಿದಿದೆ.
ಆಹಾರ ಪದಾರ್ಥಗಳ ದರವು ಶೇ 5.49ರಿಂದ ಶೇ 5.44ಕ್ಕೆ ಇಳಿಕೆಯಾಗಿದ್ದರೆ, ತಯಾರಿಕಾ ವಲಯದ ಸರಕುಗಳ ಬೆಲೆಯು ಜೂನ್‌ನ ಶೇ 7.48ರಿಂದ ಜುಲೈನಲ್ಲಿ ಶೇ 8.29ಕ್ಕೆ ಏರಿಕೆಯಾಗಿದೆ.