
ಬೆಂಗಳೂರಿನಲ್ಲಿ ಆರ್ಟಿಒ ಅಧಿಕಾರಿಗಳು ನಡೆಸಿದ ಬೃಹತ್ ಕಾರ್ಯಾಚರಣೆಯಲ್ಲಿ ತೆರಿಗೆ ವಂಚಿಸುತ್ತಿದ್ದ ಹೊರರಾಜ್ಯ ನೋಂದಣಿಯ 200ಕ್ಕೂ ಹೆಚ್ಚು ಐಷಾರಾಮಿ ವಾಹನಗಳನ್ನು ಜಪ್ತಿ ಮಾಡಲಾಗಿದೆ.
ಈ ಕಾರ್ಯಾಚರಣೆಯ ಮೂಲಕ ಸರ್ಕಾರಕ್ಕೆ ವಂಚಿಸುತ್ತಿದ್ದ 3 ಕೋಟಿ ರೂಪಾಯಿ ದಂಡವನ್ನು ಅಧಿಕಾರಿಗಳು ವಸೂಲಿ ಮಾಡಿದ್ದು, ಈ ತಿಂಗಳ ಕೊನೆಯವರೆಗೂ ದಾಳಿ ಮುಂದುವರಿಯಲಿದೆ.
ಪಾಂಡಿಚೇರಿ, ತಮಿಳುನಾಡು, ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳ ನೋಂದಣಿ ಹೊಂದಿರುವ ಕಾರುಗಳನ್ನು ಸ್ಥಳೀಯ ರಸ್ತೆ ತೆರಿಗೆ ಪಾವತಿಸದೆ ಬಳಸುತ್ತಿದ್ದ ಆರೋಪದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ.