
ಅಕ್ಟೋಬರ್ 15ರಿಂದ ಗ್ರಾಹಕರಿಂದ ವ್ಯಾಪಾರಿಗೆ ಆಗುವ 2,000 ರೂ ಮೇಲ್ಪಟ್ಟ ಯುಪಿಐ ಪಾವತಿಗಳಿಗೆ ಶೇ. 0.4ರಷ್ಟು ಎಂಡಿಆರ್ ಶುಲ್ಕ ಅನ್ವಯವಾಗಲಿದೆ.
ಎನ್ಪಿಸಿಐ ಮಾರ್ಗಸೂಚಿಗಳ ಪ್ರಕಾರ ಸಂಗ್ರಹವಾಗುವ ಎಂಡಿಆರ್ ಶುಲ್ಕದಲ್ಲಿ ಗ್ರಾಹಕರ ಬ್ಯಾಂಕ್ಗೆ ಶೇ. 40, ವರ್ತಕರ ಬ್ಯಾಂಕ್ಗೆ ಶೇ. 30, ಯುಪಿಐ ಆ್ಯಪ್ಗೆ ಶೇ. 20 ಹಾಗೂ ಪಾಟ್ನರ್ ಬ್ಯಾಂಕ್ಗೆ ಶೇ. 10ರಷ್ಟು ಸಿಗಲಿದೆ.
ಪೇಟಿಎಂ ಪೇಮೆಂಟ್ ಅಗ್ರಿಗೇಟರ್ ಲೈಸೆನ್ಸ್ ಹೊಂದಿದ್ದು ಬ್ಯಾಂಕ್ಗಳೊಂದಿಗೆ ಸಹಭಾಗಿತ್ವ ಪಡೆದಿರುವುದರಿಂದ ಕ್ಯೂಆರ್ ಕೋಡ್ ಸ್ಕ್ಯಾನ್ ಪಾವತಿಗಳಲ್ಲಿ ಸಿಂಹಪಾಲು ಆದೇಶ ಪಡೆಯಲಿದೆ.