
ಹಾಸನ ತಾಲೂಕಿನ ಉಗನೆ ಕೊಪ್ಪಲು ಗ್ರಾಮದಲ್ಲಿ 12 ಲಕ್ಷ ರೂ. ಸಾಲ ಮರುಪಾವತಿಸಿಲ್ಲ ಎಂಬ ಕಾರಣಕ್ಕೆ ಈಕ್ವೆಟಾಸ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ರೈತ ಮಹಿಳೆಯ ಮನೆಯನ್ನು ಜಪ್ತಿ ಮಾಡಿದೆ.
2023ರಲ್ಲಿ ಸಾಲ ಪಡೆದಿದ್ದ ಕುಟುಂಬವು ಈಗಾಗಲೇ 3 ಲಕ್ಷ ರೂ. ಪಾವತಿಸಿದ್ದರೂ, ಬ್ಯಾಂಕ್ ಸಿಬ್ಬಂದಿ 12 ದಿನಗಳ ಹಿಂದೆ ಮನೆಗೆ ಬೀಗ ಜಡಿದು ಕುಟುಂಬವನ್ನು ಬೀದಿಗೆ ತಳ್ಳಿದ್ದರು.
ನಿಯಮ ಉಲ್ಲಂಘಿಸಿ ಮನೆ ಜಪ್ತಿ ಮಾಡಿದ ಹಿನ್ನೆಲೆಯಲ್ಲಿ, ಸ್ಥಳಕ್ಕೆ ಬಂದ ರಾಜ್ಯ ರೈತ ಸಂಘದ ಪದಾಧಿಕಾರಿಗಳು ಬೀಗ ಒಡೆದು ಕುಟುಂಬವನ್ನು ಮತ್ತೆ ಮನೆಗೆ ಸೇರಿಸಿದ್ದಾರೆ.