ರಾಜ್ಯದ 59,050 ಮತಗಟ್ಟೆಗಳಲ್ಲಿ ನಡೆದ ಸಮೀಕ್ಷೆಯಲ್ಲಿ 86,64,501 ಮತದಾರರನ್ನು ಎಎಸ್ಡಿಡಿಒ ಎಂದು ವರ್ಗೀಕರಿಸಲಾಗಿದ್ದು, ಇವರ ಹೆಸರು ಪಟ್ಟಿಯಿಂದ ಕೈಬಿಟ್ಟು ಹೋಗುವ ಸಾಧ್ಯತೆಯಿದೆ.
ಈ ಪೈಕಿ 53.39 ಲಕ್ಷ ಸ್ಥಳಾಂತರಗೊಂಡವರು, 15.14 ಲಕ್ಷ ಮೃತಪಟ್ಟವರು, 11.92 ಲಕ್ಷ ಪತ್ತೆಯಾಗದವರು ಮತ್ತು 5.74 ಲಕ್ಷ ದ್ವಿಪ್ರತಿ ಮತದಾರರು ಸೇರಿದ್ದಾರೆ.
ಆಗಸ್ಟ್ 17ರಂದು ಕರಡು ಮತದಾರರ ಪಟ್ಟಿ ಪ್ರಕಟವಾಗಲಿದ್ದು, ಹೆಸರು ಬಿಟ್ಟುಹೋದವರು ಅಗತ್ಯ ದಾಖಲೆ ಸಲ್ಲಿಸಿ ಅಂತಿಮ ಪಟ್ಟಿಯಲ್ಲಿ ಮರುಸೇರ್ಪಡೆಗೆ ಅವಕಾಶವಿರುತ್ತದೆ ಎಂದು ಮುಖ್ಯ ಚುನಾವಣಾಧಿಕಾರಿ ತಿಳಿಸಿದ್ದಾರೆ.