
ವಾಹನದಲ್ಲಿ ಸರಿಯಾದ ಮತ್ತು ಚಾಲ್ತಿಯಲ್ಲಿರುವ ಫಾಸ್ಟ್ಯಾಗ್ ಇದ್ದು, ಟೋಲ್ ಪ್ಲಾಜಾದ ಸ್ಕ್ಯಾನರ್ ದೋಷದಿಂದ ಸ್ಕ್ಯಾನ್ ಆಗದಿದ್ದರೆ ಚಾಲಕರು ಯಾವುದೇ ಶುಲ್ಕ ಪಾವತಿಸುವಂತಿಲ್ಲ ಎಂದು ಎನ್‌ಎಚ್‌ಎಐ ಸ್ಪಷ್ಟಪಡಿಸಿದೆ.
ಫಾಸ್ಟ್ಯಾಗ್ ಇಲ್ಲದಿರುವುದು, ನಿಷ್ಕ್ರಿಯಗೊಂಡಿರುವುದು ಅಥವಾ ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ಇಲ್ಲದಿರುವ ಸಂದರ್ಭಗಳಲ್ಲಿ ದುಪ್ಪಟ್ಟು ಶುಲ್ಕ ಅನ್ವಯವಾಗಲಿದೆ ಎಂದು ತಿಳಿಸಲಾಗಿದೆ.
ಟೋಲ್ ಬೂತ್‌ನಲ್ಲಿ ಫಾಸ್ಟ್ಯಾಗ್ ಸ್ಕ್ಯಾನ್ ಆಗದಿದ್ದಾಗ ನಗದಿನ ಬದಲಿಗೆ ಯುಪಿಐ ಅಥವಾ ಡಿಜಿಟಲ್ ಮಾಧ್ಯಮದಲ್ಲಿ ಪಾವತಿಸಿದರೆ ಮೂಲ ಶುಲ್ಕದ ಶೇ. 25ರಷ್ಟು ಹೆಚ್ಚುವರಿ ಮೊತ್ತ ನೀಡಿದರೆ ಸಾಕಾಗುತ್ತದೆ.