
ಸಂಗೀತ ನಿರ್ದೇಶಕ ಇಳಯರಾಜಾ ಅವರ ಸಾರ್ವಕಾಲಿಕ ಹಿಟ್ ಹಾಡುಗಳ ಹಕ್ಕುಸ್ವಾಮ್ಯ ವಿಚಾರದಲ್ಲಿ ದೆಹಲಿ ಹೈಕೋರ್ಟ್ ನೀಡಿದ್ದ ತೀರ್ಪಿನಲ್ಲಿ ಮಧ್ಯಪ್ರವೇಶಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.
ಇಳಯರಾಜಾ ಅವರಿಗೆ ಕೇವಲ ರಾಗ ಅಥವಾ ಮೆಲೋಡಿ ಸಂಯೋಜನೆಯ ಹಕ್ಕು ಮಾತ್ರ ಇರುತ್ತದೆ ಹೊರತು ಇಡೀ ಧ್ವನಿಮುದ್ರಣ ಮತ್ತು ಸಾಹಿತ್ಯದ ಮೇಲೆ ಪೂರ್ಣ ಹಕ್ಕಿರುವುದಿಲ್ಲ ಎಂದು ಕೋರ್ಟ್ ಸ್ಪಷ್ಟಪಡಿಸಿದೆ.
ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದಿವಾಲಾ ಮತ್ತು ಕೆ. ವಿನೋದ್ ಚಂದ್ರನ್ ಅವರಿದ್ದ ಪೀಠವು ಇಳಯರಾಜಾ ಅವರ ಅರ್ಜಿಯನ್ನು ವಜಾಗೊಳಿಸಿದೆ.