
ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವು ಎಲ್ಲಾ ಕ್ಷೇತ್ರಗಳಲ್ಲಿಯೂ ವೇಗವಾಗಿ ಬೆಳೆಯುತ್ತಿದ್ದು ಮನುಷ್ಯರ ಕೆಲಸಗಳನ್ನು ಯಂತ್ರಗಳು ಮಾಡುತ್ತಿವೆ ಎಂದು ಜೋಹೋ ಸಹ-ಸಂಸ್ಥಾಪಕ ಶ್ರೀಧರ್ ವೆಂಬು ತಿಳಿಸಿದ್ದಾರೆ.
ಎಐ ಎಷ್ಟೇ ಬೆಳೆದರೂ ಮುಂದಿನ ದಿನಗಳಲ್ಲಿ ಧರ್ಮ ಮತ್ತು ನಂಬಿಕೆಯ ಪ್ರಾಮುಖ್ಯತೆ ಹೆಚ್ಚಾಗಬಹುದು ಹಾಗೂ ಆಧುನಿಕ ಸಮಾಜಕ್ಕೆ ಹಳೆಯ ನಂಬಿಕೆಗಳೇ ದಾರಿ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಜೀವನವನ್ನು ಅರ್ಥಮಾಡಿಕೊಳ್ಳಲು ಮತ್ತು ತಮ್ಮನ್ನು ತಾವು ಗುರುತಿಸಿಕೊಳ್ಳಲು ಧರ್ಮದ ಬಗ್ಗೆ ಹೆಚ್ಚು ಗಮನಹರಿಸಬೇಕು ಎಂದು ಅವರು ಸನಾತನ ಧರ್ಮದೊಂದಿಗೆ ತಳಕುಹಾಕಿ ಮಾತನಾಡಿದ್ದಾರೆ.