
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಶಾಶ್ವತ ಸದಸ್ಯತ್ವ ನೀಡಬೇಕೆಂಬ ಬೇಡಿಕೆಗೆ ಮಧ್ಯ ಯುರೋಪ್‌ನ ಪ್ರಮುಖ ನಾಲ್ಕು ದೇಶಗಳು ಮುಕ್ತ ಬೆಂಬಲ ವ್ಯಕ್ತಪಡಿಸಿವೆ.
ನ್ಯೂಯಾರ್ಕ್‌ನಲ್ಲಿ ನಡೆದ ಮೊದಲ ‘ವಿ4-ಇಂಡಿಯಾ’ ಸಭೆಯಲ್ಲಿ ಪೋಲೆಂಡ್, ಹಂಗೇರಿ, ಸ್ಲೋವಾಕಿಯಾ ಮತ್ತು ಜೆಕ್ ಗಣರಾಜ್ಯಗಳು ಭಾರತವನ್ನು ಇಂಡೋ-ಪೆಸಿಫಿಕ್ ವಲಯದ ಮುಂಬರುವ ಸೂಪರ್ ಪವರ್ ಎಂದು ಬಣ್ಣಿಸಿವೆ.
ಯೂಎನ್‌ಎಸ್‌ಸಿ ಸುಧಾರಣೆಯ ಜೊತೆಗೆ ವಾರ್ಷಿಕ ವಿದೇಶಾಂಗ ಸಚಿವರ ಸಮಾವೇಶ, ವ್ಯಾಪಾರ ವೇದಿಕೆ ಹಾಗೂ ಬಾಹ್ಯಾಕಾಶ ಮತ್ತು ರಕ್ಷಣೆಯಲ್ಲಿ ಸಹಕಾರ ಹೆಚ್ಚಿಸಲು ಎರಡೂ ಕಡೆಯವರು ಒಪ್ಪಂದ ಮಾಡಿಕೊಂಡಿದ್ದಾರೆ.