
ಟಾಲಿವುಡ್ ಸ್ಟಾರ್ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಜೋಡಿಯಾಗಿ ನಟಿಸಿರುವ ಐತಿಹಾಸಿಕ ಆ್ಯಕ್ಷನ್-ಡ್ರಾಮಾ ‘ರಣಬಾಲಿ’ ಚಿತ್ರದ ‘ದಿ ಸ್ಯಾವೇಜಸ್ ಓತ್’ ಎಂಬ ಶೀರ್ಷಿಕೆಯಡಿ ರಗಡ್ ಟೀಸರ್ ಬಿಡುಗಡೆಯಾಗಿದೆ.
ರಾಹುಲ್ ಸಾಂಕೃತ್ಯನ್ ನಿರ್ದೇಶನದ ಈ ಚಿತ್ರದ 2 ನಿಮಿಷ 32 ಸೆಕೆಂಡುಗಳ ಟೀಸರ್ 1876-1878ರ ಅವಧಿಯಲ್ಲಿ ಸಂಭವಿಸಿದ ‘ಮದ್ರಾಸ್ ಕ್ಷಾಮ’ದ ಹಿನ್ನೆಲೆಯನ್ನು ಹೊಂದಿದೆ.
ಹಾಲಿವುಡ್ ನಟ ಆರ್ನಾಲ್ಡ್ ವೋಸ್ಲೂ ‘ಸರ್ ಥಿಯೋಡೋರ್ ಹೆಕ್ಟರ್’ ಎಂಬ ಕ್ರೂರ ಬ್ರಿಟಿಷ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಚಿತ್ರವು ದಸರಾ ಹಬ್ಬದ ಶುಭಸಮಯದಲ್ಲಿ, ಅಂದರೆ ಅಕ್ಟೋಬರ್ 16ರಂದು ವಿಶ್ವದಾದ್ಯಂತ ಕನ್ನಡ, ತೆಲುಗು, ಹಿಂದಿ, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ತೆರೆಗೆ ಬರಲಿದೆ.