
ರಾಜ್ಯದಲ್ಲಿ ಕೃತಕ ಪನ್ನೀರ್ (Analogue Paneer) ಮಾರಾಟ ಮತ್ತು ಬಳಕೆಯನ್ನು ತಡೆಯಲು ಆಹಾರ ಸುರಕ್ಷತಾ ಇಲಾಖೆಗೆ ಕಠಿಣ ಕ್ರಮ ಕೈಗೊಳ್ಳಲು ಆರೋಗ್ಯ ಸಚಿವ ಯು.ಟಿ. ಖಾದರ್ ಸೂಚಿಸಿದ್ದಾರೆ.
ಪಾಮ್ ಆಯಿಲ್, ವೆಜಿಟೆಬಲ್ ಆಯಿಲ್ ಮತ್ತು ಎಮಲ್ಸಿಫೈಯರ್ಗಳನ್ನು ಬಳಸಿ ತಯಾರಿಸುವ ಕೃತಕ ಪನ್ನೀರ್ ಮಾರಾಟವನ್ನು ಆಹಾರ ಸುರಕ್ಷತಾ ಕಾಯ್ದೆಯಡಿ ನಿಷೇಧಿಸಲು ಸರ್ಕಾರ ಮುಂದಾಗಿದೆ.
ಈ ನಿಷೇಧವನ್ನು ಪ್ರಸ್ತುತ ಒಂದು ವರ್ಷದ ಅವಧಿಗೆ ಜಾರಿಗೊಳಿಸಲಾಗುತ್ತಿದ್ದು, ಅಗತ್ಯವಿದ್ದರೆ ಪ್ರತಿ ವರ್ಷ ಪರಿಶೀಲಿಸಿ ಮುಂದುವರಿಸಲು ಆಹಾರ ಸುರಕ್ಷತಾ ಆಯುಕ್ತರಿಗೆ ನಿರ್ದೇಶನ ನೀಡಲಾಗಿದೆ.