
ನೈಜೀರಿಯಾದ ಲಾಗೋಸ್‌ನಲ್ಲಿ ನಡೆಯುತ್ತಿರುವ 23 ವರ್ಷದೊಳಗಿನವರ ಕಾಮನ್‌ವೆಲ್ತ್ ಫೆನ್ಸಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಭಾರತ ಒಟ್ಟು 24 ಪದಕಗಳನ್ನು ಗೆದ್ದು ಪ್ರಾಬಲ್ಯ ಮೆರೆದಿದೆ.
ಮಂಗಳವಾರದ ಸ್ಪರ್ಧೆಯಲ್ಲಿ ತನಿಷ್ಕಾ ಖತ್ರಿ ಈಪೀ ವಿಭಾಗದಲ್ಲಿ ಚಿನ್ನದ ಪದಕ ಗೆದ್ದರೆ, ಖುಷಿ ದಾಭಾಡೆ ಬೆಳ್ಳಿ ಮತ್ತು ಪ್ರಾಚಿ ಲೋಹನ್ ಕಂಚಿನ ಪದಕ ಪಡೆದಿದ್ದಾರೆ.
ಪುರುಷರ ಫಾಯಿಲ್ ವಿಭಾಗದಲ್ಲಿ ತೇಜಸ್ ಪಾಟೀಲ್ ಕಂಚಿನ ಪದಕ ಗೆದ್ದಿದ್ದು, ಭಾರತ ತಂಡವು ಒಟ್ಟಾರೆ ನಾಲ್ಕು ಚಿನ್ನ ಸೇರಿದಂತೆ ಹಲವು ಪದಕಗಳನ್ನು ತನ್ನದಾಗಿಸಿಕೊಂಡಿದೆ.