
ಮಂಗಳೂರು-ಬೆಂಗಳೂರು ವಿಮಾನ ಮಾರ್ಗವು ಅತಿಹೆಚ್ಚು ವಾಯುದಂಚೆ ಸಾಗಣೆ ಮಾಡುವ ಮೂಲಕ ದೇಶದಲ್ಲೇ ಮೊದಲ ಸ್ಥಾನ ಪಡೆದುಕೊಂಡಿದೆ.
2025ರ ಏಪ್ರಿಲ್‌ನಿಂದ 2026ರ ಮಾರ್ಚ್ ಅಂತ್ಯದವರೆಗೆ ಮಂಗಳೂರಿನಿಂದ ಬೆಂಗಳೂರಿಗೆ ಒಟ್ಟು 3,238.09 ಟನ್ ವಾಯು ಸರಕು ಸಾಗಣೆಯಾಗಿದ್ದು, ಇದರಲ್ಲಿ ಶೇ. 95ರಷ್ಟು ಇಂಡಿಯಾ ಪೋಸ್ಟ್ ವಾಯುದಂಚೆಯಾಗಿದೆ.
ಪರೀಕ್ಷಾ ಪ್ರಶ್ನೆ ಪತ್ರಿಕೆಗಳು, ಚೆಕ್ ಪುಸ್ತಕಗಳು ಮತ್ತು ಕ್ರೆಡಿಟ್ ಕಾರ್ಡ್‌ಗಳಂತಹ ಅತಿ ಸುರಕ್ಷಿತ ದಾಖಲೆಗಳ ಸಾಗಣೆಗೆ ಈ ಮಾರ್ಗವು ಪ್ರಮುಖ ಕೊಂಡಿಯಾಗಿದೆ.